Motivational ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
Motivational ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

Best msg by Ravi D Channannavar


ಮನಸು ಮಾಡಿದರೇ...
ನಿನ್ನ ಹಣೆಬರಹ ಇಷ್ಟೇ
ಅಂದವರೂ ಸಹ...
ನಿನ್ನ ಮುಂದೆ ತಲೆ ತಗ್ಗಿಸುವ
ತಾಕತ್ತು ನಿನ್ನಲ್ಲಿದೆ.

ಸಾಧ್ಯವಾದರೆ ಓಡು
ಆಗಲಿಲ್ಲವಾದರೆ ನಡೆ
ಅದೂ ಸಾಧ್ಯವಾಗದಿರೆ
ಉರುಳಿ ಕೊಂಡು ಹೋಗು ಅಷ್ಟೇ!
ಆದರೆ ಕದಲದೇ
ಬಿದ್ದಿರಬೇಡ ಒಂದೇ ಕಡೆ

ಕೆಲಸ ಸಿಗಲಿಲ್ಲವೆಂದು,
ವ್ಯಾಪಾರ ನಷ್ಟವಾಯಿತೆಂದು
ಗೆಳೆಯನೊಬ್ಬ ಮೋಸಮಾಡಿದನೆಂದು,
ಪ್ರೀತಿಸಿದವಳು
ಕೈಬಿಟ್ಟಳೆಂದು!!

ಹಾಗೆ ಇದ್ದರೆ ಹೇಗೆ..?
ದಾಹಕ್ಕೆ ಬಾರದ
ಸಮುದ್ರದ ಅಲೆಗಳು ಕೂಡಾ
ಕುಣಿದು ಕುಪ್ಪಳಿಸುತ್ತವೆ ನೋಡು!


Ravi D Channannavar...


ಸೋಲು☺

ನಿಮ್ಮ ಗೆಲುವಿನ ಅನುಭವಗಳನ್ನು ಕಿರಿಯರೊಂದಿಗೆ ಹಂಚಿಕೊಳ್ಳಿ ಅವರು ಅನುಸರಿಸಬಹುದು
ಸೋಲಿನ ಅನುಭವಗಳನ್ನು ಹಿರಿಯರೊಂದಿಗೆ ಹಂಚಿಕೊಳ್ಳಿ ಅವರು ಮಾರ್ಗದರ್ಶನ ಮಾಡಬಹುದು
ಅನುಭವಗಳೆಂದರೆ ‘ಸೋಲು-ಗೆಲುವು‘ಗಳ ಮಿಶ್ರಣ ವಷ್ಟೆ

ಅರಿವಿನ ಮನೆಯೊಳು ಗುರುವಿನ ಹುಡುಕಾಟ,ಅರಿಯದೇ ಕೂತ ಮನಸೊಳು ಪೊಳ್ಳು ಯೋಚನೆಗಳ ಅಲೆದಾಟ!
ಎಲ್ಲ ಬಲ್ಲವ ಮೇಲಿರುವಾಗ ನಮ್ಮದು ನಿಮ್ಮದು ಬರಿ ಚದುರಂಗದಾಟ!!



 

ಮನಸುಗಳ ಮಾತು ಮಧುರ ..!

"ಮನಸು ಮೂಕವಾದಾಗ
ಮಾತು ಮೌನವಾಗುತ್ತೆ
ಮನಸಿಗೆ ಸಂತಸವಾದಾಗ
ಮಾತು ನಗುವಾಗುತ್ತೆ
ಮನಸಿಗೆ ದುಃಖವಾದಾಗ
ಮಾತು ಕಣ್ಣೀರಾಗುತ್ತೆ
ಮನಸಿಗೆ ದುಗುಡವಾದಾಗ
ಮಾತು ಗದ್ಗದಿತವಾಗುತ್ತೆ....


"ಈ ಮನಸ್ಸು ಒಂಥರಾ ವಿಚಿತ್ರ
ಬೆಲೆ ಕಟ್ಟಲಾಗದ ಪ್ರೀತಿಯನ್ನು
ವಾತ್ಸಲ್ಯಭರಿತ ಸಂಬಂಧವನ್ನು
ಇರುವ ಆತ್ಮೀಯತೆಯನ್ನು ಗುರುತಿಸದೇ
ಇಲ್ಲದ ಕಡೆಯಲೆಲ್ಲಾ ಹುಡುಕಾಡಿ ನರಳುತ್ತದೆ...!!!                                                                                                                  

ಬದುಕು ☺

"ಎಲ್ಲಾ ಬೆರಳುಗಳೂ ಒಂದೇ ರೀತಿಯ ಅಳತೆಯನ್ನು ಹೊಂದಿಲ್ಲ.
ಆದರೆ
ಅವು ಬಗ್ಗಿ ನಿಂತರೆ ಎಲ್ಲವೂ ಒಂದೇ ಸಮನಾದೀತು.
ಬದುಕಿನಲ್ಲೂ ಹಾಗೆ ನಾವು ಬಾಗುವುದಾದರೆ ಮತ್ತು ಸನ್ನಿವೇಶಗಳಿಗೆ ಹೊಂದಿಕೊಳುವುದಾದರೆ ಬದುಕು ತುಂಬಾ ಸರಳ"..


ಎದುರಾಳಿಯನ್ನು ಮಾತಿನಲ್ಲಿ ಬಾಯಿ ಮೇಲೂ ಮಾಡಿ ಗೆಲ್ಲುವುದಕ್ಕಿಂತ
ಮೌನದಲ್ಲಿ ಸುಮ್ಮನಿದ್ದು ಗೆಲ್ಲುವುದು ಉತ್ತಮ
ಮಾತು ಸಾವಿರ ಸಮಸ್ಯೆ ಉಂಟು ಮಾಡಿದರೆ
ಮೌನ ಸಾವಿರ ಉತ್ತರ ಹುಡುಕಿ ಕೊಡುತ್ತದೆ